Showing posts with label ಹುಚ್ಚು ಮನಸಿಗೆ ತೋಚಿದನ್ನು ಗೀಚುತ್ತಾ. Show all posts
Showing posts with label ಹುಚ್ಚು ಮನಸಿಗೆ ತೋಚಿದನ್ನು ಗೀಚುತ್ತಾ. Show all posts

Sunday, August 30, 2009

ಹಾಗೆ ಸುಮ್ಮನೆ..

ಬಾನಿನ ಮೋಡದ ತೆರೆಯ
ಹಿಂದೆಲ್ಲೋ ನಿಂತಿರುವೆ
ತಿಂಗಳ ಬೆಳಕಿಗೆ ನಿನ್ನ
ತಂಪನ್ನು ತುಂಬಿರುವೆ

ನದಿಯ ಬಳುಕಿನ ಓಟಕೆ
ನಾದವ ನೀ ನುಡಿಸಿ
ಎಲ್ಲಿ ಅವಿತೆ ಸಖಿಯೆ
ಕರೆದಿಹೆನು ಕೈಬೀಸಿ

ತೆರೆಮರೆಯ ಆಟವ ಮುಗಿಸು
ಬಾ ಬೇಗ ಓ ಒಲವೆ
ಹೃದಯದ ಬಾಗಿಲ ತೆರೆದು
ನಿನಗಾಗಿ ಕಾದಿರುವೆ...