Friday, June 6, 2008

ಗಣಿಯಲ್ಲಿ ಅವಿತ ಸರ್ಕಾರ

- ಬಳ್ಳಾರಿಯಲ್ಲಿ ಹತ್ತು ಸ್ಥಾನ ಗೆಲ್ಲಿಸಿಕೊಡುತ್ತೇನೆ - ಜನಾರ್ದನ ರೆಡ್ಡಿ
- ಬಳ್ಳಾರಿಯಲ್ಲಿ ಬಿ.ಜೆ.ಪಿಗೆ ಒಂಬತ್ತು ಸ್ಥಾನ ಗೆಲುವು.
- ರೆಡ್ಡಿ & Co. ಗೆ ಸಚಿವ ಸ್ಥಾನ.
- ನಾನು ಉಪಮುಖ್ಯಮಂತ್ರಿ ಆಗಲು ಸಿದ್ಧ ಎಂದ 'ಕರುಣಾ'ಕರ ರೆಡ್ಡಿ.
- ಜನಾರ್ದನ ರೆಡ್ಡಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗುರು'ಭಕ್ತಿ' ಮೆರೆದ ಬಳ್ಳಾರಿ ಶಾಸಕರು.

ಕಳೆದ ಒಂದು ತಿಂಗಳಲ್ಲಿ ಕರ್'ನಾಟಕ' ದಲ್ಲಿ ನಡೆದ ಘಟನಾವಳಿಗಳ ದರ್ಶನ ಇದು. ಕರ್ನಾಟಕದಲ್ಲಿ ಬಿ.ಜೆ.ಪಿಯ ಸರಕಾರ ರಚಿಸುವಲ್ಲಿ ನಮ್ಮ ಬಳ್ಳಾರಿಯ ಗಣಿಗಳು ಮಹತ್ವದ ಪಾತ್ರವಹಿಸಿದರು. ಬಳ್ಳಾರಿಯ ಸ್ಥಾನಗಳಲ್ಲಿ ಸಿಂಹಪಾಲು ಗೆಲ್ಲಿಸಿದಲ್ಲದೆ, ಸರಕಾರಕ್ಕೆ ಸೇರಲು ಪಕ್ಷೇತರರನ್ನು 'ಓಲೈಸಿ'ದರು. ಚುನಾವಣೆಯಲ್ಲಿ ತಮ್ಮ 'ಶಕ್ತಿ' ಪ್ರದರ್ಶನ ಮಾಡಿ ಪಕ್ಷಕ್ಕೆ ಅಚ್ಚು ಮೆಚ್ಚಾದರು. ಚುನಾವಣೆಗೆ ಮುಂಚೆ ದೇವೇಗೌಡರನ್ನು 'KingMaker' ಎಂದೇ ವಿಶ್ಲೇಷಿಸಿದ್ದರೆ, ನಿಜವಾದ 'KingMaker' ಆಗಿ ಬಂದದ್ದು ಜನಾರ್ದನ ರೆಡ್ಡಿ .

ನಮ್ಮ ಯಡ್ಡಿಯೂರಪ್ಪನವರು ತಮ್ಮ ಕೃತಘ್ನತೆ ಸಲ್ಲಿಸಲು ರೆಡ್ಡಿ ಸಹೋದರರಿಗೆ ಸಚಿವ ಸ್ಥಾನ ನೀಡಿದ್ದಾರೆ. ಗಣಿ ಸಚಿವಾಲಯ ರೆಡ್ಡಿ ತಕ್ಕೆಗೆ ಸೇರುವ ಎಲ್ಲಾ ಸಾಧ್ಯತೆ ಇದೆ. ಒಟ್ಟಿನಲ್ಲಿ ಸರಕಾರ ರೆಡ್ಡಿಯ ಋಣದಲ್ಲಿ ಇದೆ. ಕರ್ನಾಟಕವನ್ನು ದೇವರೇ ಕಾಪಾಡಲಿ...

ಹುಳಿ ಹಿಂಡು !!!