ಇಷ್ಟು ಹೊತ್ತು ಒಟ್ಟಿಗಿದ್ದು
ಹಾಗೆ ದೂರಕೆ ಸರಿಯುತಿದೆ
ನೀ ಜೊತೆಗಿರಲು ಎಂಥಾ ಉಲ್ಲಾಸ
ದಿನವಿಡೀ ಬರೀ ಮೋಜು, ಸಂತೋಷ
ಹೋಗುವುದು ಅನಿವಾರ್ಯ
ಯಾರು ತಡೆವರು ಕಾಲದ ವೇಗ
ಕಾದಿರುವೆ ಗೆಳೆಯ, ಬಾ ಮತ್ತೆ ಬೇಗ
ರವಿವಾರದ ರವಿಯೊಡನೆ ನೀ ಕರಗಿ ಹೋಗಿರುವೆ
ಬಾ ಮತ್ತೆ ಬೇಗ , ಓ ನನ್ನ ವೀಕೆಂಡು
ನೀ ಬರುವ ದಾರಿಯ ಕಾದಿರುವೆ..
- ಇಂತಿ ನಿನ್ನ ಪ್ರೀತಿಯ
ವೀಕೆಂಡ್ ಜೀವಿ