Sunday, August 30, 2009

ಹಾಗೆ ಸುಮ್ಮನೆ..

ಬಾನಿನ ಮೋಡದ ತೆರೆಯ
ಹಿಂದೆಲ್ಲೋ ನಿಂತಿರುವೆ
ತಿಂಗಳ ಬೆಳಕಿಗೆ ನಿನ್ನ
ತಂಪನ್ನು ತುಂಬಿರುವೆ

ನದಿಯ ಬಳುಕಿನ ಓಟಕೆ
ನಾದವ ನೀ ನುಡಿಸಿ
ಎಲ್ಲಿ ಅವಿತೆ ಸಖಿಯೆ
ಕರೆದಿಹೆನು ಕೈಬೀಸಿ

ತೆರೆಮರೆಯ ಆಟವ ಮುಗಿಸು
ಬಾ ಬೇಗ ಓ ಒಲವೆ
ಹೃದಯದ ಬಾಗಿಲ ತೆರೆದು
ನಿನಗಾಗಿ ಕಾದಿರುವೆ...

Saturday, August 1, 2009

No words

This song has been haunting me all day

ಕನ್ನಡ ಟಿ-ಶರ್ಟ್

ಕನ್ನಡ ಕವನಗಳ ಸಾಲು ಹೊತ್ತ ಟಿ-ಶರ್ಟ್ ಗಳನ್ನು ಬಹಳ ದಿನಗಳಿಂದ ಹುಡುಕುತಿದ್ದೆ. ಇಂದು ಅಂತಹ ಒಂದನ್ನು ಖರೀದಿಸಿದ್ದಾಯಿತು. ಹಾಗೆಯೇ ಒಂದು ಸಂಸ್ಥೆ ಮತ್ತು ಕೆಲವು ಸ್ನೇಹಿತರ ಪರಿಚಯವೂ ಆಯಿತು. ಸಮಾಜ ಸೇವಕರ ಸಮಿತಿ ಹೊರತಂದಿರುವ ಈ ಟಿ-ಶರ್ಟ್ ಗಳ ಹಿಂದೆ ಒಂದು ಒಳ್ಳೆಯ ಆಲೋಚನೆ, ಕ್ರಿಯೆ ಅಡಗಿದೆ. ಈ ಸಂಸ್ಥೆ ಬಳ್ಳಾರಿ ಜಿಲ್ಲೆಯಲ್ಲಿ ಗ್ರಾಮೀಣ, ಬಡ ಮಕ್ಕಳಿಗೆ ಎರಡು ಶಾಲೆಯನ್ನು ನಡೆಸುತ್ತಿದೆ. ಸದಸ್ಯರ ದೇಣಿಗೆ ಮತ್ತು ಕನ್ನಡ ಟಿ-ಶರ್ಟ್, ಅಂಚೆ ಕಾರ್ಡ್ ಗಳ ಮಾರಾಟದಿಂದ ಮಕ್ಕಳ ಜ್ಞಾನಾರ್ಜನೆಗೆ ಸಹಾಯ ಮಾಡುತ್ತಿದೆ. ಸಂಸ್ಥೆಯ ಬಗ್ಗೆ ಇನ್ನು ಹೆಚ್ಚಿನ ವಿಚಾರವನ್ನು ಮುಂದೆ ಬರೆಯುವೆ...

ಇಂದು ನಾ ಕೊಂಡು ಬಂದ ಟಿ-ಶರ್ಟ್ ಮತ್ತು ಕವಿ ಸಾಲುಗಳ ಅಂಚೆ-ಕಾರ್ಡ್ ::






ನಿಮಗೂ ಟಿ-ಶರ್ಟ್ ಬೇಕಾದಲ್ಲಿ ಈ ವಿಳಾಸವನ್ನು ಸಂಪರ್ಕಿಸಿ ::

ಸಮಾಜ ಸೇವಕರ ಸಮಿತಿ
ನಂ ೧೭೧ , ಸುಬ್ಬರಾಂ ಚೆಟ್ಟಿ ರೋಡ್
ನೆಟ್ಟಕಲ್ಲಪ್ಪ ಬಸ್ ಸ್ಟಾಪ್ ಹಿಂಭಾಗ
ಬಸವನಗುಡಿ
ಬೆಂಗಳೂರು ೪

ಇಮೇಲ್ :: sssamaja@gmail.com