Saturday, October 17, 2009

ಅವಳು

ಈ ಪರಿಯ ಸೊಬಗ ಏನೆಂದು ಬಣ್ಣಿಸಲಿ
ಸಾಟಿ ಯಾರುಂಟು ಈ ಸೊಗಸಿಗೆ ಲೋಕದಲಿ

ಮಿಂಚಿನ ಸಂಚಾರ ಅವ ಕುಳಿತ ಮನದಲ್ಲಿ
ವರ್ಣಿಸಲಿ ಹೇಗೆ ಅವಳ ಏಳೆಂಟು ಪದಗಳಲಿ??

ಅವಳ ಮೊಗವ ನೋಡಿ ಮೊಗ್ಗಾಯ್ತು ಮಲ್ಲಿಗೆ
ಹಾಡುವ ಬಾನಾಡಿ ಮತ್ಸರದಿ ಓಡಿತು ಎಲ್ಲಿಗೆ
ದೂರದಿ ನಿಂತು ಬೀರಿದಳು ಹೂನಗೆ
ಇಲ್ಲೇ ಇದ್ದ ಜೀವ ಹಾರಿತು ಮೆಲ್ಲಗೆ

ಮನದ ಮಾರ್ದನಿಯಂತೆ ಮುದ್ದಿನ ಮಾತು ಪೇಲ್ವ
ಕುಸುಮ ಕೋಮಲೆ ನನ್ನವಳು
ಜೀವನ ರಸಕಾವ್ಯಕೆ ಮುತ್ತಿನ ಮುನ್ನುಡಿ ಬರೆದು
ಒಲವ ಸಹಿಯನು ಇಟ್ಟವಳು

ಈ ಪರಿಯ ಸೊಬಗ ಏನೆಂದು ಬಣ್ಣಿಸಲಿ
ಸಾಟಿ ಯಾರುಂಟು ಈ ಸೊಗಸಿಗೆ ಲೋಕದಲಿ

10 comments:

Dattatreya said...

ಶರಣು ಗುರು ! ನನಿಗೆ ಬೇರೆ ಏನು ತೋಚ್ತಾ ಇಲ್ಲ .. The start, the middle two paragraph.. and the ending.. its all perfect.. ಕವನ ಬರಿಯುವುದರಲ್ಲಿ ನನ್ನ ಅನುಭವ ಅಲ್ಪ ಆದರೆ ಈ ಕವನ ನನ್ನ ಮನವನ್ನ ಮುಟ್ಟಿದೆ :) ಈ ರೀತಿ ಇನ್ನ ಹೆಚ್ಚು ಕವನಗಳನ್ನು ಬರಿಯಲು ಪ್ರೇರಣೆ ಭಗವಂತ ಕೊಡಲಿ :)

On a ligther note.. ಯಾರ್ ಗುರು ಆ ಪರಿ ?? ;)

ಯಾರವಳು ಹೊಕ್ಕಿರುವಳು ನಿನ್ನ ಮಾನವ
ಹೊರಡಿಸುತಿರುವಳು ನಿನ್ನ ಮೂಲಕ ಈ ಸುಂದರ ಬರವ (ಬರವಣಿಗೆಯ ಎಂದರ್ಥ)
ಸೇರು ನೀ ಬೇಗ ಅವಳ, ಅವಳು ಸೇರಲಿ ನಿನ್ನ - ಇದು ನನ್ನ ಕೋರಿಕೆ
ಇಬ್ಬರು ಸೇರಿ ಬರಿಯಿರಿ ನಿಮ್ಮ ಸುಖ ಜೀವನದ ಕವನ ಸದಾ - ಇದು ನನ್ನ ಹಾರೈಕೆ :)

PS - ಸುಮ್ನೆ ನಂದು ಇರ್ಲಿ ಅಂತ ಹಾಕಿದ್ದೀನಿ, ಬೇಜಾರ್ ಮಾಡ್ಕೋಬೇಡ :)

Srikanth said...

@Datta

Thanks maga for your ಕೋರಿಕೆ and ಹಾರೈಕೆ ..
One confession here..
first line alli ಪರಿ anta bardiddu bere meaning alli.. ಪರಿ andre ರೀತಿ anta artha ide..so hange barde..
but ur interpretation as "Angel" suits even better..
Thanks for identifying the unintended pun :)

Harini J said...

super poem!
this time somehow i feel like appreciating ur command over kannada than pulling ur leg(which is wat i usually do :) )
and i am feeling awkward that my mother tongue and my 1st language in high school is becoming more and more alien to me although I still talk in kannada!! :(

mhaseeb said...

Awesome maga.

Bharathi said...

Keerthy/Dattatreya - I need a translation of this poem!Help maadi!!!

Srikanth said...

@Harini
Thanks for your comments :-) I also share your concern..Still trying to learn my mother-tongue :-P

@Haseeb
Thanks maga

@Bharathi..

Hahaa I will make sure that you wont get a translation of this poem..otherwise am gone... :P

Keerthy said...

Uff!! Uff!! Uff!! Ee Kannadada balakege nanna hrudpoorvaka dhanyavaadagalu.....Idannu odi spashtavaagi arthamaadikollalu swalpa refer madbekaagatte enannadru :)....Ee Deepavalige haagu kannada Raajyotsavada munna:

This is for you poem!

Kannadada Kraantige ee Kavanavu aagali munnudi,
Jwaaleyagadiddaru sari, hanate hottisali ee Kannadada Kidi!

Amma and me both enjoyed the poem :). Innu bari :).

Dattatreya said...

To be honest, i never read the poem by taking "pari" as rEti! haha.. i guess this is a SIGN! Start writing keeping "Pari" (with a capital P) in mind :)

Sudhindra A said...

Awesome kano !!! Language used in the poem is really good.

bala said...

excellent poetry.. In specific I liked the following two lines -

"ಅವಳ ಮೊಗವ ನೋಡಿ ಮೊಗ್ಗಾಯ್ತು ಮಲ್ಲಿಗೆ
ಹಾಡುವ ಬಾನಾಡಿ ಮತ್ಸರದಿ ಓಡಿತು ಎಲ್ಲಿಗೆ"


grt imagination !!