ನಿನ್ನೆ ರಸ್ತೆಯಲ್ಲಿ ಬರುವಾಗ ಹಾಗೆ ಸುಮ್ಮನೆ ಆಕಾಶದತ್ತ ಕಣ್ಣಾಯಿಸಿದೆ. ಪಡುವಣದ ಆಗಸದಲ್ಲಿ ಚೆಂದಿರ ಒಮ್ಮೆ ತುಸು ನಕ್ಕ ಹಾಗೆ ಅನಿಸಿತು. ಮತ್ತೆ ನೋಡಿದೆ. ಹೌದು, ಚೆಂದಿರ ಭೂಮಿಯ ನೋಡಿ ಮುಗುಳ್ನಗುತ್ತಿದ್ದಾನೆ. ( ನಾವು ಕಳಿಸಿದ ಚಂದ್ರಯಾನ ಅಲ್ಲಿಗೆ ತಲುಪಿತು ಎಂದು ಹೇಳಲು ಇರಬಹುದೇ?? :) )
ಕವಿಸಮಯ ಹಾಗಿರಲಿ.. ನಿಜ ಸಂಗತಿ ಇದು..ಸಂಜೆ ಆಕಾಶದಲ್ಲಿ ಒಂದು ಅಪರೂಪವಾದ ಘಟನೆಗೆ ನಾವು ಸಾಕ್ಷಿಯಾಗಿದ್ದೇವೆ. ಇದನ್ನು ವಿಜ್ಞಾನಿಗಳು ಸಮ್ಮಿಲನ (Celestial Rendevous) ಎಂದು ಕರೆಯುತ್ತಾರೆ. ಶುಕ್ರ (venus) ಮತ್ತು ಗುರು (Jupiter) ಗ್ರಹಗಳು ಸೂರ್ಯನ ಸಮೀಪ ಸುತ್ತುವಾಗ ಭೂಮಿಯಿಂದ ನೋಡಿದಾಗ ಹತ್ತಿರ ಇದ್ದ ಹಾಗೆ ಕಂಡಿತು. ಈ ಗ್ರಹಗಳು ಆಕಾಶದಲ್ಲಿ ಚೆಂದ್ರನ ಮೇಲೆ ಕಂಡು ಈ ಮನೋಜ್ಞ ದೃಶ್ಯ ಸೃಷ್ಟಿಯಾಯಿತು.
ಚುರುಮುರಿಯಲ್ಲಿ ಇದರ ವೀಡಿಯೊ ನೋಡಿ
ಸ್ವಲ್ಪ ಹೆಚ್ಚು ವಿಷಯ ಇಲ್ಲಿ
Best Funny Jokes for Kids
10 months ago
No comments:
Post a Comment