Saturday, November 1, 2008

ಕನ್ನಡ ರಾಜ್ಯೋತ್ಸವ


ಕನ್ನಡ ನಾಡಿಗೆ ೫೩ನೇ ಹುಟ್ಟು ಹಬ್ಬದ ಶುಭಾಶಯಗಳು.ಈ ಸಂಧರ್ಬದಲ್ಲಿ ಆಚರಣೆಯ ಜೊತೆಗೆ ಸ್ವಲ್ಪ ಯೋಚನೆಯ ಅಗತ್ಯತೆ ಕೂಡ ಒದಗಿಬಂದಿದೆ. ನಾವು ಕನ್ನಡದ ನುಡಿ, ಸಂಸ್ಕೃತಿ, ಸಂಸ್ಕಾರಗಳನ್ನು ಎಲ್ಲೋ ಮರೆಯುತ್ತಿರುವಂತೆ ಭಾಸವಾಗುತ್ತಿದೆ. ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ಅನ್ಯ ಭಾಷಿಗರು ಹೆಚ್ಚು ಇದ್ದಾರೆ. ಆಧುನಿಕತೆಗೆ, ಇತರ ಭಾಷಾ ಹಾವಳಿಗೆ ಕನ್ನಡದ ದೀಪ ಆರದಿರಲಿ.

ಈ ದಿನದಂದು ಎಲ್ಲರಿಗೂ ನನ್ನ ಮನವಿ :
  • ದಯಮಾಡಿ ಇತರರೊಡನೆ ಕನ್ನಡದಲ್ಲಿ ಮಾತನಾಡಿ. ಅವರಿಗೆ ಕನ್ನಡ ಬರದಿದರೆ ಕನ್ನಡ ಕಲಿಸಿ. ಕರ್ನಾಟಕಕ್ಕೆ ವಲಸೆ ಬಂದ ಜನಕನ್ನಡ ಕಲಿಯದಿದ್ದರೆ ಹೇಗೆ?? ( ಮುಖ್ಯವಾಗಿ ನಮ್ಮ "ಸಾಫ್ಟ್ ವೇರ್ ಇಂಜಿನಿಯರ್ ಗಳಿಗೆ")
  • ಕನ್ನಡ ಪುಸ್ತಕಗಳನ್ನು "ಕೊಂಡು" ಓದಿ...

" ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ

ಬಾಯ್ ಒಲಿಸಾಕಿದ್ರೂನೆ-

ಮೂಗ್ನಲ್ ಕನ್ನಡ್ ಪದವಾಡ್ತೀನಿ!

ನನ್ ಮನಸನ್ನ್ ನೀ ಕಾಣೆ! " - ಎಂದ ನಮ್ಮ ರತ್ನನ ಮಾತು ನಮಗೆ ದಾರಿದೀಪವಾಗಲಿ...

1 comment:

Murali said...

Hi Srikanth,

Can you please provide me your Mobile number?

am Murali from bangalore.
we are planning for edukkumeri trekking, if u provide me your mobile number, i can call u some time & share ideas.

My mobile No: 9902007272.
dayavittu nimma mobile number kodi sir.