Saturday, November 22, 2008

ಮನಸಿನ ಪುಟಗಳು

ಏಕೋ ಕಾಣೆ..ಕೆಲವು ದಿನಗಳಿಂದ ಮನಸು ಸ್ವಲ್ಪ ಭಾರವಾಗಿ ಅನಿಸುತಿದೆ. ಏನೋ ನಾನಾ ಪ್ರಶ್ನೆಗಳು ಹುಟ್ಟಿ ಉತ್ತರಕ್ಕಾಗಿ ಹುಡುಕುತಿದೆ.

ಈ ಬದುಕು ಏನು, ಏಕೆ, ಎಲ್ಲಿಗೆ ???

ಆಗ ನೆನಪಾಗಿದ್ದು ಈ ಸಾಲುಗಳು....
ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು |
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು
ಪದ ಕುಸಿಯೆ ನೆಲವಿಹುದು - ಮಂಕುತಿಮ್ಮ ||


ದೂರದಲ್ಲಿ ಅಡಿಗರ "ಯಾವ ಮೋಹನ ಮುರಳಿ ಕರೆಯಿತು" ಗೀತೆಯ ಈ ಸಾಲು ಕೇಳಿತು...
"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನಾ... "

1 comment:

pavan said...

so very true sisya...