Sunday, January 11, 2009

ಪೆಟ್ರೋಲ್ ಪರದಾಟ

ಇಂದು ಬೆಳಿಗ್ಗೆ ಎದ್ದು ಮೊದಲು ನೆನಪಾದದ್ದು ನನ್ನ ಗಾಡಿಗೆ ಪೆಟ್ರೋಲ್ ಹಾಕಿಸಬೇಕು ಎಂದು.. ನಿನ್ನೆ ಎಲ್ಲಾ ವಾರ್ತೆಯಲ್ಲಿ ಪೆಟ್ರೋಲ್ ಅಭಾವದ ಬಗ್ಗೆ ಕೇಳಿ ಕನಸಲ್ಲೂ ನಾನು ಗಾಡಿಯನ್ನು ನೂಕುವ ದೃಶ್ಯ... ಸರಿ ಪೆಟ್ರೋಲ್ ಬಂಕ್ ಗಾಗಿ ಹುಡುಕುತ್ತಾ ಹೊರಟೆ. ಎಲ್ಲಿ ನೋಡಿದರೂ ಖಾಲಿ ಬಂಕ್ ಗಳು.. "No Stock" ಫಲಕ ಹೊಂದಿದ್ದ ಬಂಕ್ ಗಳು ಯಾವುದೋ ಪಾಳುಬಿದ್ದ ಐತಿಹಾಸಿಕ ಸ್ಥಳಗಳಂತೆ ಭಿಕೋ ಎನ್ನುತಿದ್ದವು. ಪೆಟ್ರೋಲ್ ಅರಸಿ ಹೊರೆಟ ನನಗೆ ಅರ್ಧ ಗಂಟೆಯ ನಂತರ ಒಂದು ಪೆಟ್ರೋಲ್ ಹೊಂದಿದ ಬಂಕ್ ಕಂಡಿತು. ಬಂಕ್ ನಲ್ಲಿ ಜನ ಸಾಗರ. ತಿರುಪತಿಯಲ್ಲಿ ದರ್ಶನಕ್ಕೆ ನಿಂತಂತೆ ಜನ ಸೇರಿದ್ದರು..ಸರಿ, ಅಳಿಯನ ಜೊತೆ ಗೆಳೆಯನಂತೆ ನಾನು ನಿಂತೆ. ಒಂದು ಗಂಟೆಯ ಹರಸಾಹಸದ ನಂತರ ನನ್ನ ಗಾಡಿಗೆ ಎರಡು ಲೀಟರ್ ಪೆಟ್ರೋಲ್ ಗಿಟ್ಟಿಸೋ ಹೊತ್ತಿಗೆ ಸಾಕು ಸಾಕಾಗಿ ಹೋಯ್ತು...

ಪೆಟ್ರೋಲ್ ಗಾಗಿ ಕಾಡು ನಿಂತಾಗ ನನಗೆ ಹೊಳೆದ ಅಂದು ವಿಷಯ ನಿಮ್ಮ ಮುಂದೆ ಇದುತಿದೇನೆ..ಯಾವುದೇ ಒಂದು ವಸ್ತುವಿನ ಮಾರಾಟಕ್ಕೆ ತನ್ನದೇ ಆದ "Demand-Supply" ಚೈನ್ ಇರುತ್ತದೆ. ಇದು ಸಮತೋಲನದಲ್ಲಿ ಇರುವವರೆಗೂ ಎಲ್ಲವೂ ಸರಿಯಾಗಿ ಸುಸೂತ್ರವಾಗಿ ನಡೆಯುತ್ತಾ ಇರುತ್ತದೆ.. ಸಮತೋಲನ ಕಳಚಿದಾಗ ಆ ವಸ್ತುವಿನ ಅಭಾವ ಉಂಟಾಗುತ್ತದೆ. ಬಹಳಷ್ಟು ಭಾರಿ ಗ್ರಾಹಕರಾದ ನಮ್ಮಿಂದಲೇ ಇಂತಹ ಅಭಾವ ಆಗುತ್ತದೆ. ಉದಾಹರಣೆಗೆ ಪೆಟ್ರೋಲ್ ಅನ್ನೇ ತೆಗೆದುಕೊಳ್ಳಿ .. ಪೆಟ್ರೋಲ್ ಕಂಪನಿಗಳು ತಮ್ಮ ಕಾರ್ಯ ಸ್ಥಗಿತಗೊಳಿಸಿದರಿಂದ ತೈಲದ ಕೊರತೆ ಉಂಟಾಗಿದ್ದು ನಿಜ, ಅದಕ್ಕೆ ಸೇರಿಕೊಂಡಂತೆ ಜನರು ಮುಂಜಾಗ್ರತೆಗಾಗಿ ಬಂಕ್ ಗಳಿಗೆ ಧಾವಿಸಿ ಪೆಟ್ರೋಲ್ ಶೇಖರಿಸಿಕೊಂದರು.. ಜನ ಮುಂದೆ ಸಿಗದೇ ಇರಬಹುದು ಎಂದು ಭಾವಿಸಿ ಅಗತ್ಯಕಿಂತ ಹೆಚ್ಚು ಕೊಂಡರು.. ಹೀಗಾಗಿ ಡಿಮ್ಯಾಂಡು ಜಾಸ್ತಿಯಾಗಿ ಕೃತಕ ಅಭಾವ ಸೃಷ್ಟಿಯಾಗುತ್ತದೆ..

ಇದು ಮಾರುಕಟ್ಟೆಯ ಎಲ್ಲ ವಸ್ತುಗಳಿಗೆ ಅನ್ವಯಿಸುತ್ತದೆ..ಹೀಗೆ ಒಂದು ಕೃತಕ ಅಭಾವದಿಂದ "ಡಿಮ್ಯಾಂಡು" ಅಥವಾ ಬೇಡಿಕೆ ಜಾಸ್ತಿಯಾಗಿ ವಸ್ತುವಿನ ಬೆಲೆ ಹೆಚ್ಚುತ್ತದೆ.. ನಾವು ಅಗತ್ಯಕ್ಕಿಂತ ಜಾಸ್ತಿ ಖರೀದಿಸಿ ಶೇಖರಿಸಿಡುವ ಬದಲು ಅಗತ್ಯ ಬಿದ್ದಾಗ ಮಾತ್ರ ಬೇಕಾದಷ್ಟು ಖರೀದಿಸುವುದು ಸೂಕ್ತವಲ್ಲವೇ??? ಒಂದು ರೀತಿಯ planned buying ಇಂದ ನಾವು ವಸ್ತುಗಳ ಬೆಲೆ ಏರಿಕೆಯನ್ನು ಸಾದ್ಯವಾದಷ್ಟು ನಿಯಂತ್ರಿಸಬಹುದು...ಏನಂತೀರಿ...

No comments: