Friday, January 23, 2009

ಅನಂತದಲ್ಲಿ ಲೀನವಾದ ರಾಜು

ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಚಿಕ್ಕ ವಯಸಿನಲ್ಲಿಯೇ ದೊಡ್ಡ ಹೆಸರು ಮಾಡಿದ್ದ ರಾಜು ಅನಂತಸ್ವಾಮಿ ಅವರು ತೀರಿಕೊಂಡಿದ್ದಾರೆ. ಪ್ರಖ್ಯಾತ ಸಂಗೀತ ಸಂಯೋಜನೆಕಾರ, ಗಾಯಕ ಮೈಸೂರು ಅನಂತಸ್ವಾಮಿ ಅವರ ಪುತ್ರರಾದ ರಾಜು ತಂದೆಯ ಹಾಗೆಯೇ ಗಾಯನ, ಗೀತ ಸಂಯೋಜನೆಯಲ್ಲಿ ಎತ್ತಿದ ಕೈ. ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಇವರಿಬ್ಬರ ಹೆಸರು ಅಜರಾಮರ. ಕವಿಗಳ ಪುಸ್ತಕಗಳಲ್ಲಿ ಅಡಗಿ ಕುಳಿತಿದ್ದ ಕವನಗಳನ್ನು ಕನ್ನಡಿಗರ ಮನೆ-ಮನಗಳಿಗೆ ತಲುಪಿಸಿದ ಶ್ರೇಯಸ್ಸು ಮುಖ್ಯವಾಗಿ ಇವರಿಗೆ ಸೇರಬೇಕು.

ರಾಜು ಅವರ ಹಾಡುಗಾರಿಕೆ ಅವರ ತಂದೆಯವರ ಹಾಡುಗಾರಿಕೆ ಬಹಳ ಹೋಲುತಿತ್ತು. ಹಾರ್ಮೋನಿಯಂ ಮೀಟುತ್ತಾ ರಾಜು ಹಾಡುತ್ತಿದ್ದರೆ ಕವನದ ಭಾವ-ಭಾವನೆ ಕೇಳುಗನ ಹೃದಯಕ್ಕೆ ನಾಟುವಂತಿತ್ತು. ಕವಿಯ ಗೀತೆಗೆ ಜೀವ ತುಂಬುವುದು ಇಂತ ಗಾಯಕರು ತಾನೆ... ರಾಜರತ್ನಂರವರ ರತ್ನನ ಪದಗಳು , ಟಿ.ಪಿ.ಕೈಲಾಸಂರವರ ಕವನಗಳನ್ನು ಅನಂತ-ದ್ವಯರ ದನಿಯಲ್ಲಿಯೇ ಕೇಳಬೇಕು.

"ಭೂಮಿನ್ ತಬಿದ್ ಮೋಡಿದ್ದಂಗೆ ...ಮಡಿಕೇರಿ ಮೇಲ್ ಮಂಜು", "ಕುರಿಗಳು ಸಾರ್ ಕುರಿಗಳು" , "ಯಂಡ ಯದ್ತಿ ಕನ್ನಡ ಪದಗಳ್" , "ಬದುಕು ಜಟಕಾ ಬಂಡಿ" , " ಎಲ್ಕೊಲ್ಲಕೊಂದೂರು" , "ಬಾ ಮಳೆಯೇ ಬಾ"... ಹೀಗೆ ಅನೇಕ ಗೀತೆಗಳನ್ನು ಪ್ರಸಿದ್ದ ಮಾಡಿದವರು ಈ ತಂದೆ-ಮಗನ ಜೋಡಿ.. "ಬ್ರಹ್ಮ ನಿಂಗೆ ಜೋಡಿಸ್ತೀನಿ ಯಂದ ಮುತ್ತಿದ ಕೈನ" ಎಂದು ಹಾಡಿದ ರಾಜು ಅದೇ ಹೆಂಡಕ್ಕೆ ಬಲಿಯಾಗಿದ್ದು ವಿಪರ್ಯಾಸ..

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕ್ಕೆ ನಿನ್ನನು....
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು...

1 comment:

Keerthy said...

Kannada kanda ati kiriya haagu kriyaatmaka sangeetagaarana madireyu bali tegedukondaddu namma duraadrushta!