Saturday, November 1, 2008

ಈ ದಿನ..ಎಂಥ ಸುದಿನ..

ಇಂದು ನಾನು ಜಯನಗರದಲ್ಲಿ ಇರುವ ಒಂದು ಪುಸ್ತಕದ ಮಳಿಗೆಗೆ ಹೋಗಿದ್ದೆ. ಅಲ್ಲಿ ಕಾಲಿಡುತ್ತಿದಂತೆ ನನಗೆ ಒಂದು ಅಚ್ಚರಿ ಕಾದಿತ್ತು. ಎಂದೂ ಹಿಂದಿ ಹಾಡು ಹಾಕುವ ಅಂಗಡಿಯಲ್ಲಿ ಕನ್ನಡದ ಭಾವಗೀತೆಯ ದನಿ ಕೇಳಿಸಿತು. ಸಂತಸಗೊಂದು ಹಾಗೆ ಅಂಗಡಿಯ ಒಂದು ಸುತ್ತು ಹಾಕಿದೆ. ಒಂದು ಮೊಲೆಯಲ್ಲಿ ಇರುವ ಕನ್ನಡ ವಿಭಾಗಕ್ಕೆ ಹೋದೆ. ಯಾವಾಗಲು ಖಾಲಿ ಅಥವಾ ಬೆರಳೆಣಿಕೆಯಷ್ಟು ಜನ ಇರುತ್ತಿದ್ದ ಅಲ್ಲಿ ಜನ ಜಂಗುಳಿ. ಕನ್ನಡ ಪುಸ್ತಕಗಳನ್ನು ಹುಡುಕಿ, ಕೇಳಿ ಪಡೆಯುತಿದ್ದರು.

ಮನದಲ್ಲಿ ಏನೋ ಸಂತೋಷ, ನಮ್ಮ ಜನ ಡಾನ್ ಬ್ರೌನ್, ಚೇತನ್ ಭಗತ್ ರನ್ನು ಬಿಟ್ಟು ನಮ್ಮ ಕುವೆಂಪು,ಅಡಿಗರ ಪುಸ್ತಕಗಳನ್ನು ಕೊಂಡುಕೊಳ್ಳುತ್ತಿದ್ದರು. ಇದೇ ಹುಮ್ಮಸ್ಸಿನಲ್ಲಿ ನಾನೂ ತೇಜಸ್ವಿಯವರ ಎರಡು ಪುಸ್ತಕಗಳ ಕೊಂಡು ಬಂದೆ..

ಈ ಕನ್ನಡ ಕಾಳಜಿ, ಕನ್ನಡ ಪ್ರಜ್ಞೆ ನವಂಬರಕ್ಕೆ ಸೀಮಿತವಾಗದೆ ನಿರಂತರವಾಗಿ ಇರಲಿ, ಕನ್ನಡದ ಕಂಪು ಎಲ್ಲೆಡೆ ಹರಡಲಿ...

ಪರ್ಪಂಚ್ ಇರೋ ತನಕ ಮುಂದೆ ಕನ್ನಡ್ ಪದಗೊಳ್ ನುಗ್ಲಿ!...

3 comments:

pavan said...

ಬಹಳ ಚೆನ್ನಾಗಿತ್ತು..but as u said this shud happen throughout the year...and not only in november...

Bharathi said...

hey..what boy,pls translate it for me :(!!!

Srikanth said...

Bhama..learn Kannada..so that atleast you can read my blog :)