Saturday, January 24, 2009

A day of shopping

Monday being republic day,this is an extended weekend and I have my long list of work to be done. No,not official work, but things like reading novels, watching movies and more movies. A new item was added to my list when a friend of mine called up on thursday to check if I can accompany him for shopping... Stop!!!! I know it is weird for two guys to out with the actual intention of "shopping".. The fact is, friend of mine is leaving for US next week and we had to buy loads of stuffs for the journey.

So, our shopping maha-expedition started at around noon from jayanagar. By then, I had already spent an hour at one of the book store and had bought two novels and a movie. We headed towards S.P road, the place to look out for (pirated) electronic and computer goods in search of portable hard disk. And then we moved on to buy DVDs, Game CDs,trolleys, warm clothes, shirts and so on.. It was 9 in the night by the time our list had reached the last item, a mobile phone.. At the end of the day, we together have shopped for around 17K and roamed around whole of Bangalore from Jayanagar to SP Road to Majestic to Koramangala to Commercial Street...

What a day!!! and what a start to my weekend..Time to retire to bed after a tireful day.. :)

Friday, January 23, 2009

ಅನಂತದಲ್ಲಿ ಲೀನವಾದ ರಾಜು

ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಚಿಕ್ಕ ವಯಸಿನಲ್ಲಿಯೇ ದೊಡ್ಡ ಹೆಸರು ಮಾಡಿದ್ದ ರಾಜು ಅನಂತಸ್ವಾಮಿ ಅವರು ತೀರಿಕೊಂಡಿದ್ದಾರೆ. ಪ್ರಖ್ಯಾತ ಸಂಗೀತ ಸಂಯೋಜನೆಕಾರ, ಗಾಯಕ ಮೈಸೂರು ಅನಂತಸ್ವಾಮಿ ಅವರ ಪುತ್ರರಾದ ರಾಜು ತಂದೆಯ ಹಾಗೆಯೇ ಗಾಯನ, ಗೀತ ಸಂಯೋಜನೆಯಲ್ಲಿ ಎತ್ತಿದ ಕೈ. ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಇವರಿಬ್ಬರ ಹೆಸರು ಅಜರಾಮರ. ಕವಿಗಳ ಪುಸ್ತಕಗಳಲ್ಲಿ ಅಡಗಿ ಕುಳಿತಿದ್ದ ಕವನಗಳನ್ನು ಕನ್ನಡಿಗರ ಮನೆ-ಮನಗಳಿಗೆ ತಲುಪಿಸಿದ ಶ್ರೇಯಸ್ಸು ಮುಖ್ಯವಾಗಿ ಇವರಿಗೆ ಸೇರಬೇಕು.

ರಾಜು ಅವರ ಹಾಡುಗಾರಿಕೆ ಅವರ ತಂದೆಯವರ ಹಾಡುಗಾರಿಕೆ ಬಹಳ ಹೋಲುತಿತ್ತು. ಹಾರ್ಮೋನಿಯಂ ಮೀಟುತ್ತಾ ರಾಜು ಹಾಡುತ್ತಿದ್ದರೆ ಕವನದ ಭಾವ-ಭಾವನೆ ಕೇಳುಗನ ಹೃದಯಕ್ಕೆ ನಾಟುವಂತಿತ್ತು. ಕವಿಯ ಗೀತೆಗೆ ಜೀವ ತುಂಬುವುದು ಇಂತ ಗಾಯಕರು ತಾನೆ... ರಾಜರತ್ನಂರವರ ರತ್ನನ ಪದಗಳು , ಟಿ.ಪಿ.ಕೈಲಾಸಂರವರ ಕವನಗಳನ್ನು ಅನಂತ-ದ್ವಯರ ದನಿಯಲ್ಲಿಯೇ ಕೇಳಬೇಕು.

"ಭೂಮಿನ್ ತಬಿದ್ ಮೋಡಿದ್ದಂಗೆ ...ಮಡಿಕೇರಿ ಮೇಲ್ ಮಂಜು", "ಕುರಿಗಳು ಸಾರ್ ಕುರಿಗಳು" , "ಯಂಡ ಯದ್ತಿ ಕನ್ನಡ ಪದಗಳ್" , "ಬದುಕು ಜಟಕಾ ಬಂಡಿ" , " ಎಲ್ಕೊಲ್ಲಕೊಂದೂರು" , "ಬಾ ಮಳೆಯೇ ಬಾ"... ಹೀಗೆ ಅನೇಕ ಗೀತೆಗಳನ್ನು ಪ್ರಸಿದ್ದ ಮಾಡಿದವರು ಈ ತಂದೆ-ಮಗನ ಜೋಡಿ.. "ಬ್ರಹ್ಮ ನಿಂಗೆ ಜೋಡಿಸ್ತೀನಿ ಯಂದ ಮುತ್ತಿದ ಕೈನ" ಎಂದು ಹಾಡಿದ ರಾಜು ಅದೇ ಹೆಂಡಕ್ಕೆ ಬಲಿಯಾಗಿದ್ದು ವಿಪರ್ಯಾಸ..

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕ್ಕೆ ನಿನ್ನನು....
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು...

Sunday, January 11, 2009

ಹಾಗೆ ಸುಮ್ಮನೆ

ಮತ್ತದೇ ಬೇಸರ
ಅದೇ ಸಂಜೆ
ಅದೇ ಏಕಾಂತ....

ನಿನ್ನ ಜೊತೆ ಇಲ್ಲದೆ , ಮಾತಿಲ್ಲದೆ
ಮನ ವಿಭ್ರಾಂತ....

ಏಕೋ ಈ ಹಾಡು ತುಂಬಾ ನೆನಪಾಗುತ್ತಾ ಇದೆ....

ನಿಸಾರ್ ಅಹ್ಮದರ ಈ ಹಾಡು ಪಲ್ಲವಿಯವರ ದನಿಯಲ್ಲಿ ...




ಕೇಳಿ, ಆನಂದಿಸಿ...

ಪೆಟ್ರೋಲ್ ಪರದಾಟ

ಇಂದು ಬೆಳಿಗ್ಗೆ ಎದ್ದು ಮೊದಲು ನೆನಪಾದದ್ದು ನನ್ನ ಗಾಡಿಗೆ ಪೆಟ್ರೋಲ್ ಹಾಕಿಸಬೇಕು ಎಂದು.. ನಿನ್ನೆ ಎಲ್ಲಾ ವಾರ್ತೆಯಲ್ಲಿ ಪೆಟ್ರೋಲ್ ಅಭಾವದ ಬಗ್ಗೆ ಕೇಳಿ ಕನಸಲ್ಲೂ ನಾನು ಗಾಡಿಯನ್ನು ನೂಕುವ ದೃಶ್ಯ... ಸರಿ ಪೆಟ್ರೋಲ್ ಬಂಕ್ ಗಾಗಿ ಹುಡುಕುತ್ತಾ ಹೊರಟೆ. ಎಲ್ಲಿ ನೋಡಿದರೂ ಖಾಲಿ ಬಂಕ್ ಗಳು.. "No Stock" ಫಲಕ ಹೊಂದಿದ್ದ ಬಂಕ್ ಗಳು ಯಾವುದೋ ಪಾಳುಬಿದ್ದ ಐತಿಹಾಸಿಕ ಸ್ಥಳಗಳಂತೆ ಭಿಕೋ ಎನ್ನುತಿದ್ದವು. ಪೆಟ್ರೋಲ್ ಅರಸಿ ಹೊರೆಟ ನನಗೆ ಅರ್ಧ ಗಂಟೆಯ ನಂತರ ಒಂದು ಪೆಟ್ರೋಲ್ ಹೊಂದಿದ ಬಂಕ್ ಕಂಡಿತು. ಬಂಕ್ ನಲ್ಲಿ ಜನ ಸಾಗರ. ತಿರುಪತಿಯಲ್ಲಿ ದರ್ಶನಕ್ಕೆ ನಿಂತಂತೆ ಜನ ಸೇರಿದ್ದರು..ಸರಿ, ಅಳಿಯನ ಜೊತೆ ಗೆಳೆಯನಂತೆ ನಾನು ನಿಂತೆ. ಒಂದು ಗಂಟೆಯ ಹರಸಾಹಸದ ನಂತರ ನನ್ನ ಗಾಡಿಗೆ ಎರಡು ಲೀಟರ್ ಪೆಟ್ರೋಲ್ ಗಿಟ್ಟಿಸೋ ಹೊತ್ತಿಗೆ ಸಾಕು ಸಾಕಾಗಿ ಹೋಯ್ತು...

ಪೆಟ್ರೋಲ್ ಗಾಗಿ ಕಾಡು ನಿಂತಾಗ ನನಗೆ ಹೊಳೆದ ಅಂದು ವಿಷಯ ನಿಮ್ಮ ಮುಂದೆ ಇದುತಿದೇನೆ..ಯಾವುದೇ ಒಂದು ವಸ್ತುವಿನ ಮಾರಾಟಕ್ಕೆ ತನ್ನದೇ ಆದ "Demand-Supply" ಚೈನ್ ಇರುತ್ತದೆ. ಇದು ಸಮತೋಲನದಲ್ಲಿ ಇರುವವರೆಗೂ ಎಲ್ಲವೂ ಸರಿಯಾಗಿ ಸುಸೂತ್ರವಾಗಿ ನಡೆಯುತ್ತಾ ಇರುತ್ತದೆ.. ಸಮತೋಲನ ಕಳಚಿದಾಗ ಆ ವಸ್ತುವಿನ ಅಭಾವ ಉಂಟಾಗುತ್ತದೆ. ಬಹಳಷ್ಟು ಭಾರಿ ಗ್ರಾಹಕರಾದ ನಮ್ಮಿಂದಲೇ ಇಂತಹ ಅಭಾವ ಆಗುತ್ತದೆ. ಉದಾಹರಣೆಗೆ ಪೆಟ್ರೋಲ್ ಅನ್ನೇ ತೆಗೆದುಕೊಳ್ಳಿ .. ಪೆಟ್ರೋಲ್ ಕಂಪನಿಗಳು ತಮ್ಮ ಕಾರ್ಯ ಸ್ಥಗಿತಗೊಳಿಸಿದರಿಂದ ತೈಲದ ಕೊರತೆ ಉಂಟಾಗಿದ್ದು ನಿಜ, ಅದಕ್ಕೆ ಸೇರಿಕೊಂಡಂತೆ ಜನರು ಮುಂಜಾಗ್ರತೆಗಾಗಿ ಬಂಕ್ ಗಳಿಗೆ ಧಾವಿಸಿ ಪೆಟ್ರೋಲ್ ಶೇಖರಿಸಿಕೊಂದರು.. ಜನ ಮುಂದೆ ಸಿಗದೇ ಇರಬಹುದು ಎಂದು ಭಾವಿಸಿ ಅಗತ್ಯಕಿಂತ ಹೆಚ್ಚು ಕೊಂಡರು.. ಹೀಗಾಗಿ ಡಿಮ್ಯಾಂಡು ಜಾಸ್ತಿಯಾಗಿ ಕೃತಕ ಅಭಾವ ಸೃಷ್ಟಿಯಾಗುತ್ತದೆ..

ಇದು ಮಾರುಕಟ್ಟೆಯ ಎಲ್ಲ ವಸ್ತುಗಳಿಗೆ ಅನ್ವಯಿಸುತ್ತದೆ..ಹೀಗೆ ಒಂದು ಕೃತಕ ಅಭಾವದಿಂದ "ಡಿಮ್ಯಾಂಡು" ಅಥವಾ ಬೇಡಿಕೆ ಜಾಸ್ತಿಯಾಗಿ ವಸ್ತುವಿನ ಬೆಲೆ ಹೆಚ್ಚುತ್ತದೆ.. ನಾವು ಅಗತ್ಯಕ್ಕಿಂತ ಜಾಸ್ತಿ ಖರೀದಿಸಿ ಶೇಖರಿಸಿಡುವ ಬದಲು ಅಗತ್ಯ ಬಿದ್ದಾಗ ಮಾತ್ರ ಬೇಕಾದಷ್ಟು ಖರೀದಿಸುವುದು ಸೂಕ್ತವಲ್ಲವೇ??? ಒಂದು ರೀತಿಯ planned buying ಇಂದ ನಾವು ವಸ್ತುಗಳ ಬೆಲೆ ಏರಿಕೆಯನ್ನು ಸಾದ್ಯವಾದಷ್ಟು ನಿಯಂತ್ರಿಸಬಹುದು...ಏನಂತೀರಿ...

Thursday, January 8, 2009

International Year of Astronomy : IYA-2009

I have always been fascinated by the vastness of the space,energy of the stars, human interpretation of the world around him, the night sky and the list goes on and on...One of my favourite pastime during my school days was to sleep under the clear night sky and try to identify the various constellations and stars..My tiny step towards becoming a astronomer :-P


The rather boring preface was to mention that 2009 is being celebrated as the International Year of Astronomy (IYA 2009) , to remember the first use of the telescope by Galileo ,400 years ago. Check out the IYA2009 site for more information , videos and photos..

Also there is a long series of podcast that run each day of the year 2009 to celebrate IYA. This is definitely a great chance to know more about the infinite space.. Check out 365 days of astronomy site for the daily podcast...

Wish you a great year of Astronomy ahead..Happy space exploration !!!

Monday, January 5, 2009

ಹೊಸ ವರ್ಷದಲ್ಲಿ ಅದೇ ಹಳೆ ಪಾಡು..


ಕಳೆದ ಎರಡು ವಾರಗಳಿಂದ ನಿದ್ದೆ ಮಾಡುತ್ತಿದ್ದ ಬೆಂಗಳೂರಿನ ರಸ್ತೆಗಳನ್ನು ಎಬ್ಬಿಸಲು ಐ.ಟಿ ಕಂಪನಿ ವಾಹನಗಳು ಮತ್ತೆ ಬಂದಿದೆ. ಆರ್ಥಿಕ ಕುಸಿತದ ಕಾರಣದಿಂದ ಹಣ ಉಳಿಸಲು ಹೊಸ ವರ್ಷದ ಆಚರಣೆಯ ಸಬೂಬು ಹೇಳಿ ರಜೆ ನೀಡಿದ್ದ ಎಷ್ಟೋ ಕಂಪನಿಗಳು ಇಂದಿನಿಂದ ಮತ್ತೆ ಶುರು.. ( ಇನ್ನು ಎಷ್ಟು ದಿನಗಳವರೆಗೋ...), ಸೊ ಬ್ಯಾಂಗಲೋರ್ ಟ್ರಾಫಿಕ್ ಇಸ್ ಬ್ಯಾಕ್... ಹೊಸ ವರ್ಷದಲ್ಲಿ ಆಮೆ ವೇಗದಲ್ಲಿ ಮನೆಗೆ ರೇಸ್ ಮಾಡುವ ಸುಯೋಗ ನಮ್ಮದು ನಿಮ್ಮದು.. ಮಸ್ತ್ ಮಜಾ ಮಾಡಿ

ಬಹುಶಃ
ಬೆಂಗಳೂರು ಕೂಡ ಟ್ರಾಫಿಕ್ ಜಾಮ್ ಅನ್ನು ಮಿಸ್ ಮಾಡುತಿತ್ತೋ ಏನೋ...

( ವಿ.ಸೂ :: ಬೆಳಿಗ್ಗೆ ಆಫೀಸ್ನಲ್ಲಿ ಕೆಲಸ ಇಲ್ಲದೆ ಬರೆದದ್ದು.. ಹಾಗೆ ಸುಮ್ಮನೆ..!!)
( ಮತ್ತೊಂದು ವಿ.ಸೂ :: ಚಿತ್ರ ಕೃಪೆ:: ಅಲ್ಲಿ ಇಲ್ಲಿಂದ ಕದ್ದದ್ದು :) )